Monday, September 27, 2010

U....and .....I



Keep India Unite d
On 28/9  or whenever the verdict is out

STOP BREEDING HATREDNESS

LETS GIVE OURSELVES A BETTER INDIA







Wednesday, September 22, 2010

lucky

 

ಕ್ಯಾಮರಮ್ಯಾನ್ ಜೊತೆ "ಅನಿತಾಟಿವಿ 9 ಮಂಗಳೂರ್
ಕ್ಯಾಮರಮ್ಯಾನ್ ಜೊತೆ "ಸುಗುಣಾಟಿವಿ 9 ಗುಲ್ಬರ್ಗಾ
ಕ್ಯಾಮರಮ್ಯಾನ್ ಜೊತೆ "ಉಷಾಟಿವಿ 9 ಹುಬ್ಳೀ
 ಕ್ಯಾಮರಮ್ಯಾನ್ ಏನ್ ಲಕ್ಕೀ ಅದಾನ್ಲೇ

 

Friday, September 17, 2010

ಪಂಡಿತ ಪುಟ್ಟರಾಜ ಗವಾಯಿ ಗಾನಗಂಗೆಯಲ್ಲಿ ಲೀನ

 
ಗದಗ, ಸೆ. 17 : ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಅಂಧರ ಬಾಳಿನ ಅಶಾಕಿರಣವಾಗಿದ್ದ ಗದಗಿನ ವೀರೇಶ್ವರ ಪುಣ್ಯಾಶ್ರಮದ ಪಂಡಿತ ಪುಟ್ಟರಾಜ ಕವಿ ಗವಾಯಿಗಳು(97) ಶುಕ್ರವಾರ ಮಧ್ಯಾಹ್ನ 12.15ಕ್ಕೆ ಲಿಂಗೈಕ್ಯರಾಗಿದ್ದಾರೆ. ನಾಳೆ ವೀರೇಶ್ವರ ಪುಣ್ಯಾಶ್ರಮದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಠದ ಆಡಳಿತ ಮಂಡಳಿ ತಿಳಿಸಿದೆ.
ಕಳೆದ ಹಲವು ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದ ಅವರು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. ಸೋಮವಾರ ತೀವ್ರ ಅನಾರೋಗ್ಯಕ್ಕೆ ಒಳಗಾದ ಅವರನ್ನು ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ನಂತರ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದರಿಂದ ಅವರ ಅಶಯದಂತೆ ಗದಗಿನ ವೀರೇಶ್ವರ ಆಶ್ರಮಕ್ಕೆ ಕರೆದುಕೊಂಡು ಬರಲಾಗಿತ್ತು.

ಇಂದು ಬೆಳಗ್ಗೆ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಕಾಣಿಸಿಕೊಂಡಿತು. ತಕ್ಷಣ ಆಶ್ರಮಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯ ಅಧಿಕಾರಿ ಚೆನ್ನಶೆಟ್ಟಿ ನೇತೃತ್ವದ ತಂಡ ಶ್ರೀಗಳಿಗೆ ಚಿಕಿತ್ಸೆ ನಡೆಸಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶ್ರೀಗಳು ಲಿಂಗೈಕ್ಯರಾಗಿರುವುದನ್ನು ಚೆನ್ನಶೆಟ್ಟಿ ಖಚಿತಪಡಿಸಿದ್ದಾರೆ. ಜಗತ್ತಿನಾದ್ಯಂತ ಇರುವ ಅವರ ಕೋಟ್ಯಂತರ ಭಕ್ತರಿಗೆ ಶ್ರೀಗಳ ನಿಧನದ ಸುದ್ದಿ ತೀವ್ರ ಆಘಾತ ಉಂಟು ಮಾಡಿದೆ. ಮಠದಲ್ಲಿ ಶೋಕಸಾಗರ ಮನೆ ಮಾಡಿದೆ
last persona of gods on earth.. 
 

Sunday, September 12, 2010

ಬಾ ಕುಳಿತುಕೊ, ಇದು ನಾ ಬೆಳೆದ ಕೃಷ್ಣಾ ತೀರ

ಮೌನದಲಿ ಮಾತುಗಳೆಲ್ಲಾ ಕರಗಿ,
ದುಗುಡ ದುಮ್ಮಾನ ಹರಿವ ನೀರೊಂದಿಗೆ ಜರುಗಿ

ಮಿನ್ಚುಳ್ಳಿಯ ಹಾರಾಟದಿ ಮನಸು ಮರೆತು
ಕಬ್ಬಿನ ತೋಟದಿ ಸಿಹಿಯ ಸವಿದು
ಅಮೃತವೆ ಘನಿಭವಿಸಿದ ಬೆಲ್ಲ್ ಮೆದ್ದು
ಸಾಲು ಮರಗಳ ನೆರಳು, ಬಿಸಿಲಲಿ ನೆನೆದು
ಬಾ ಕುಳಿತುಕೊ, ಇದು ನಾ ಬೆಳೆದ ಕೃಷ್ಣಾ ತೀರ


ದೂರ ದೂರಕು ಎಲ್ಲವೂ ನನ್ನದೇ ಎನ್ನುವ ಹಸಿರಿನ ಜಿದ್ದು
ಬೀಸುಗಾಳಿಯೊ, ಕದ್ಡೋಯಬೇಕು ನಿನ್ನ ಎನ್ನುವ ಚೋರ
ಬಾ ಕುಳಿತುಕೊ, ಇದು ನಾ ಬೆಳೆದ ಕೃಷ್ಣಾ ತೀರ

Friday, September 10, 2010

ಕೇಳೆ "ಕವನಾ " ಇದು ನಿನಗೆಂದೇ ಬರೆದ ಕವನ

  
This is nt any gr8  1 , Once i have it composed with guitaar or keyboard..may be it should worth listening ..
wait for it, any1 with guitar skills please help :)


ಕೇಳೆ "ಕವನಾ "
ಇದು ನಿನಗೆಂದೇ ಬರೆದ ಕವನ 

ಯಾವಾಗ ನನ್ನಾ ನಿನ್ನ ಮಿಲನ ? 
ಹೇಳಿಬಿಡು ನಾನೆಂದರೆ ನಿಂಗಿಷ್ಟನಾ ? 

ಮಾಡಲೇನು ನಿನ್ನ ಅಪ್ಪನೊಂದಿಗೆ ಸದನ? 
ಮಾಡ್ಲೆ ಬೇಕೇನು ನಿನ್ನ ಅಣ್ಣಾನೊಡನೆ ಕದನ ? 

ಮಾಡು ನಿನ್ನ ಅಮ್ಮನಿಗೆ ನೀ ಮನನ 
ನಾನೇ ನಿನ್ನ ಮದನ 

ಯಾಕೆ ಕುಸುಮವೆ ನೀನು ಇರುವದು ಗಗನ 
ಬೇಡುವೆ ಕೆಳಗಿಳಿಸು ಅವಳನು ಪವನ 

ನೀನೆಂದರೆ ಏನೋ ಸಂಚಲನ 
ನೀನ್ ಇಲ್ಲದೇ ಹೇಗೆ ಜೀವನ, ಇರಲಾರೆ ನಿನ್ನ ಬಿಟ್ಟು ಕವನ :) 


ಕೇಳೆ ಕವನಾ 
ಇದು ನಿನಗೆಂದೇ ಬರೆದ ಕವನ


disclaimer : I dont knw any1 with name kavana.
dedication : UG and Tatha my all time critics ;)









Sunday, September 5, 2010

ಜೀವನದ ಓಟಕ್ಕೆ ಮತ್ತೆ ಬಂದಿದೆ ವೇಗ..

ಬಿದಿರು ಮೆಳೆಯಲಿ ಹೊಸಚಿಗುರು,
ಬಾನ ಹೃದಯದಲಿ ಒಂದರ ಮೇಲೂಂದು ಕಾಮನಬಿಲ್ಲು,
ಜೀವನದ ಓಟಕ್ಕೆ ಮತ್ತೆ ಬಂದಿದೆ ವೇಗ..
ಓಡುತ್ತಿರುವಸೈಕಲ್ ಗಂಟೆಯಲಿ ಯಾವುದೋ ಖುಷಿಯ ರಾಗ
ಯಾವುದೊ ಒಂದು ಕಾಡುವ ಕವಿತೆ, ಅಕ್ಷರವಾಗಿ ಮೂಡಬೇಕೆನ್ನುವ ಓಘ
ಮತ್ತೆ ಬಂತೇ ಮುಂಗಾರು ? ಧರೆಗೀಗ ಮಳೆಯ ಯೋಗ.