Monday, May 16, 2011

ನಮ್ಮ ಪಠ್ಯ ಪುಸ್ತಕಗಳು

ನಮ್ಮ ಪಠ್ಯ ಪುಸ್ತಕಗಳು

ಕಳೆದ ಕೆಲವು ದಿನಗಳಿಂದ ಈ ಯೋಚನೆ ಮಾಡ್ತಾ ಇದ್ದೇ... ನಮ್ಮ ಪಠ್ಯ  ಪುಸ್ತಕಗಳು..ಹಾಗೂ ಸಮಕಾಲೀನ ಅವಶ್ಯಕತೆಗಳ ಬಗ್ಗೆ.. ಈ ಮುಂಚೆ ಕೂಡ
ಹಲವು ಸಂಶೋಧನೆಗಳು , ಚರ್ಚೆಗಳು ನಡೆದಿವೆ ..ನಡೆಯುತ್ತಿವೆ...

SSLC yalli  ಶೇಕಡ ೭೩ ವಿದ್ಯಾರ್ಥಿಗಳು...ಉತ್ತೀರ್ಣರಾಗಿದ್ದಾರೆ.....ಇದೊಂದು ಐತಿಹಾಸಿಕ ಫಲಿತಾಂಶ ಎಂದು ಹೇಳಲಾಗಿದೆ..

ಈ ವಿದ್ಯಾರ್ಥಿಗಳಲ್ಲ್ಲಿ  ಎಷ್ಟು ಜನ ಮುಂದೆ ಪೀಯೂಸೀ,ಡಿಪ್ಲೊಮಾ.. ಮಾಡುತ್ತಾರೋ ಗೊತ್ತಿಲ್ಲ ಆದ್ರೆ...   ಬಹಳ ಜನ  ಇಲ್ಲಿಗೆ ತಮ್ಮ ವಿಧ್ಯಬ್ಯಾಸ ನಿಲ್ಲಿಸಿ..
ಹೊಲ ಗದ್ದೆ ಗಾಳಿಗೂ, ಹೊಟೇಲಿನಲ್ಲಿ ಕೆಳ್‌ಸಾಕ್ಕೆ ಸೇರಿ ಬಿಡುತ್ತಾರೆ... ಜಾಣರಾಗಿರದೆ ಇರಬಹ್ದು..ಅಥ್ವಾ ದುಡ್ಡಿರದೆ ಇರಬಹ್ದು...

ಆದ್ರೆ ಎಸ್ಟು ಜನ್ರಿಗೆ. ಇಲ್ಲಿಯವರೆಗೆ  ಕಲಿತ ವಿದ್ಯೆ.. ಸಹಾಯಕಾರಿಯಾಗಿದೆ ಬದುಕಿನಲ್ಲಿ..?

ನಾವು ನೋಡುತ್ತಿರುವ ಕೆಲವು ಮೂಲಭೂತ ಸಮಸ್ಯಎಗಳನ್ನು...ಇವರು ತಿಳಿಯಬಲ್ಲ್ರೆ ?

ಹೀಗೆ ಕೆಲವು ಪ್ರಶ್ನೆ ಗಳಿವೆ ನನ್ನ ಮನದಲ್ಲಿ ..

ತೆರಿಗೆ ಎಂದರೇನು ? ಯಾಕೆ ತೆರಿಗೆ ಕೊಡಬೇಕು ? ತೆರಿಗೆಇಂದೇನು ಮಾಡುತ್ತಾರೆ..?
ಬ್ಯಾಂಕು, ಅಂದರೆ ಏನು ? ವಿಮೆ ಅಂದರೇನು ?  ಯಾಕೆ ವಿಮೆ ಬೇಕು ?
ನಿಜ ಹೇಳುತ್ತೇನೆ ಇವತ್ತಿಗೂ ಕೂಡ  ಠೇವಣಿ ಸ್ಲಿಪ್ ಯಾವುದು ? ಜಮೆ ಸ್ಲಿಪ್ ಯಾವುದು ಎಂದು ತಿಳುವದಿಲ್ಲ ನಂಗೆ ....
ಅಪರಾಧ ಅಂದ್ರೆ ಏನು ? ಪೋಲೀಸ್ ಯಾರು ಯಾಕೆ ಅವರು ಬೇಕು ?
ಧರ್ಮಗಳ ಬಗ್ಗೆ ಹೇಳ್ಲಿದೀವಿ  ಆದ್ರೆ ಅದರ ಹಿಂದಿರೋ - ಶಾಂತಿ ಸಹಬಾಳ್ವೆ ಬಗ್ಗೆ ಎಲ್ಲಿ ಹೇಳುತ್ತಿವಿ ?
ವಿದ್ಯುತ್ ಎಂದ್ರೇನು ಗೊತ್ತು ಆದ್ರೆ ,ವಿದ್ಯುತ್ ತಂತಿ ಕಟ್ತಾಗಿ ಬಿದ್ದಾಗ ಏನು ಮಾಡಬೇಕು ?..
ಎಲ್ಲಿ ? ಮೂಢ ನಂಬಿಕೆ ಎಂದರೆ ಏನು ? ಜ್ಯೊತಿಶ್ಯ್ ಏನು ?


ಆಹಾರ ಸರಪಣಿ     ಗೊತ್ತು , ಆಹಾರ ಕಾಲ್ಬೆರಕೆ ?
ಔಷದಿ ಗೊತ್ತು .. ಆದ್ರೆ - expiry date andrenu  ಗೊತ್ತಿಲ್ಲ .....


ನಿಮ್ಮ ವಿಚಾರ ಗಲ್ಲನ್ನು ಇಲ್ಲಿ ನಮೂದಿಸಿ....

We can take it forward ... ( please forgive my kannada typing skill ...)



Wednesday, May 11, 2011

ಹಾಯಿ ದೋಣಿ, ಸಂಜೆಯ ನೋಡುತಾ, ಸೂರ್ಯನಿಗೆ ಹೇಳಿದ ಮಾತು

ಹಾಯಿ ದೋಣಿ, ಸಂಜೆಯ ನೋಡುತಾ, ಸೂರ್ಯನಿಗೆ ಹೇಳಿದ ಮಾತು 
ಒಂದಲ್ಲ ಒಂದು ದಿನ, ನೀನು ಮುಳುಗೋಕಿಂತ ಮುಂಚೆ ನಿನ್ನ ಹಿಡಿದೆ ಹಿಡೀತೀನಿ ಎಂದು.. 

ಆಡಿ,ಅತ್ತು, ಕುಣಿದು, ನಕ್ಕು, ಸುಸ್ತಾದ ಮಗು ತಬ್ಬಿಕೊಂಡು ಹೇಳಿದ ಮಾತು 
ನಾನಿನ್ನೂ ಮಲಗಬೇಕು..ಎಂದು.. 

ಕಳೆದು ಹೋದ ಆಡುಮರಿಗೆ , ಕಾಡು ಹೇಳಿದ ಮಾತು 
ಹೆದರಬೇಡ, ಇದು ಬರಿ ಕಾಡು ಎಂದು.. 

ಶ್ರುತಿ ಬಿಡದ ಸೋನೆ ಮಳೆ,ಭೂವಿಗೆ ಹೇಳಿದ ಮಾತು 
ಶೀತವಾದರೆ ನಾನಲ್ಲ ಹೊಣೆ, ಅದು ಮೋಡ ಎಂದು.. 




ಕಾರ್ರ್ಮುಗಿಲಿಂದ ಹೊರಟ ಮಿಂಚು, ಬೆಳಕ ಕಾಣದ ಕಾನನಕ್ಕೆ
ಹೇಳಿದ ಮಾತು, ಇದೋ ನೋಡು ಕಣ್ಣು ಕೊರಯ್ಸುವ  ಚಳಕ


ಹೊಳೆಯ ಬದಿ ಗರ್ಜಿಸುದ ಹುಲಿ, ಆನೆಗೆ ಹೇಳಿದ ಮಾತು 
ಇದು ನನ್ನ ಸರಹದ್ದು ಎಂದು... 

ಬೀಸುಗಾಳಿ, ಹಾರುವ ಹಕ್ಕಿಗೆ ಹೇಳಿದ ಮಾತು 
ತೋರಿಸು ಈಗ ನಿನ್ನ ಗಮ್ಮತು.. ಎಂದು 

ಮುಂಜಾವಿನ ಇಬ್ಬನಿ ಚಂದ್ರನಿಗೆ ಹೇಳಿದ ಮಾತು.. 
ಇದೆಲ್ಲ ನಿನ್ನದೆ ಕರಾಮತ್ತು ಎಂದು.. 

ಕಾಡಿಗೆಯಲ್ಲಿ ಕಂಡ ಹೆಣ್ನ ಕಣ್ಣು ಹೇಳಿದ ಮಾತು 
ಗೆಳೆಯ, ಹೇಳು ಪ್ರಶ್ನೊತ್ತರವಿಲ್ಲದ ಸಂಗತಿ ಎಂದು.. 

ಅರ್ಧಕೆ ನಿಂತ ಕವಿತೆ , ಕವಿಗೆ ಹೇಳಿದ ಮಾತು 
ಪರ್ವಾಗಿಲ್ಲಾ, ನಾಳೆ ಮುಂದುವರಿಸು..ಎಂದು