Tuesday, November 30, 2010

ಹಾಯಿ ದೋಣಿ, ಸಂಜೆಯ ನೋಡುತಾ, ಸೂರ್ಯನಿಗೆ ಹೇಳಿದ ಮಾತು

ಹಾಯಿ ದೋಣಿ, ಸಂಜೆಯ ನೋಡುತಾ, ಸೂರ್ಯನಿಗೆ ಹೇಳಿದ ಮಾತು 
ಒಂದಲ್ಲ ಒಂದು ದಿನ, ನೀನು ಮುಳುಗೋಕಿಂತ ಮುಂಚೆ ನಿನ್ನ ಹಿಡಿದೆ ಹಿಡೀತೀನಿ ಎಂದು.. 

ಆಡಿ,ಅತ್ತು, ಕುಣಿದು, ನಕ್ಕು, ಸುಸ್ತಾದ ಮಗು ತಬ್ಬಿಕೊಂಡು ಹೇಳಿದ ಮಾತು 
ನಾನಿನ್ನೂ ಮಲಗಬೇಕು..ಎಂದು.. 

ಕಳೆದು ಹೋದ ಆಡುಮರಿಗೆ , ಕಾಡು ಹೇಳಿದ ಮಾತು 
ಹೆದರಬೇಡ, ಇದು ಬರಿ ಕಾಡು ಎಂದು.. 

ಶ್ರುತಿ ಬಿಡದ ಸೋನೆ ಮಳೆ,ಭೂವಿಗೆ ಹೇಳಿದ ಮಾತು 
ಶೀತವಾದರೆ ನಾನಲ್ಲ ಹೊಣೆ, ಅದು ಮೋಡ ಎಂದು.. 




ಕಾರ್ರ್ಮುಗಿಲಿಂದ ಹೊರಟ ಮಿಂಚು, ಬೆಳಕ ಕಾಣದ ಕಾನನಕ್ಕೆ
ಹೇಳಿದ ಮಾತು, ಇದೋ ನೋಡು ಕಣ್ಣು ಕೊರಯ್ಸುವ  ಚಳಕ


ಹೊಳೆಯ ಬದಿ ಗರ್ಜಿಸುದ ಹುಲಿ, ಆನೆಗೆ ಹೇಳಿದ ಮಾತು 
ಇದು ನನ್ನ ಸರಹದ್ದು ಎಂದು... 

ಬೀಸುಗಾಳಿ, ಹಾರುವ ಹಕ್ಕಿಗೆ ಹೇಳಿದ ಮಾತು 
ತೋರಿಸು ಈಗ ನಿನ್ನ ಗಮ್ಮತು.. ಎಂದು 

ಮುಂಜಾವಿನ ಇಬ್ಬನಿ ಚಂದ್ರನಿಗೆ ಹೇಳಿದ ಮಾತು.. 
ಇದೆಲ್ಲ ನಿನ್ನದೆ ಕರಾಮತ್ತು ಎಂದು.. 

ಕಾಡಿಗೆಯಲ್ಲಿ ಕಂಡ ಹೆಣ್ನ ಕಣ್ಣು ಹೇಳಿದ ಮಾತು 
ಗೆಳೆಯ, ಹೇಳು ಪ್ರಶ್ನೊತ್ತರವಿಲ್ಲದ ಸಂಗತಿ ಎಂದು.. 

ಅರ್ಧಕೆ ನಿಂತ ಕವಿತೆ , ಕವಿಗೆ ಹೇಳಿದ ಮಾತು 
ಪರ್ವಾಗಿಲ್ಲಾ, ನಾಳೆ ಮುಂದುವರಿಸು..ಎಂದು

1 comment: