Wednesday, April 25, 2012

ಅವಿರತ ನೋಟ್ ಪುಸ್ತಕ ವಿತರಣಾ ಯೋಜನೆ ೨೦೧೨

ನೋಟ್ ಪುಸ್ತಕ ವಿತರಣಾ ಯೋಜನೆ ೨೦೧೨ : ಈ ಯೋಜನೆಂ ೪ನೇ ವರ್ಷದ ಅನುಷ್ಠಾನದ ಅಂಗವಾಗಿ ಅವಿರತ ಬಳಗವು ರಾಜ್ಯದ ಹಿಂದುಳಿದ ಪ್ರದೇಶದ ಹೆಚ್ಚು ಮಕ್ಕಳಿಗೆ ಸಹಾಯ ತಲುಪುವ ಪ್ರಯತ್ನ ಮಾಡುತ್ತಿದ್ದೇವೆ. ಈ ಯೋಜನೆಯಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಒಂದು ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ನೋಟ್ ಪುಸ್ತಕವನ್ನು ತಲುಪಿಸುತ್ತಿದ್ದೇವೆ. 
೨೦೧೨ -೧೩ ರ ಶೈಕ್ಷಣಿಕ ವರ್ಷಕ್ಕೆ ಈ ಕಾರ್ಯಕ್ರಮವನ್ನು ಉತ್ತರ ಕರ್ನಾಟಕಕ್ಕು ವಿಸ್ತರಿಸುತ್ತಿದ್ದೇವೆ. ಇದರ ಸಲುವಗಿ ದೇಣಿಗೆ ಸಂಗ್ರಹಿಸಲು ಈ ನಾಟಕವನ್ನು ಹಮ್ಮಿಕೊಳ್ಳುತ್ತಿದ್ದೇವೆ. ನಿಮ್ಮ ಉದಾರ ಮನಸ್ಸಿನ ದೇಣಿಗೆ ಹಾಗು ಉತ್ತೇಜನ ಬಹು ಮುಖ್ಯವಾದುದು.



ಸ್ಥಳ : ಬಯೋಟೆಕ್ ಸಭಾಂಗಣ : ಬಿ.ವಿ.ಬಿ ಆವರಣ ಹುಬ್ಬಳ್ಳಿ
ದಿನಾಂಕ : ೧೯ ಮೇ ೨೦೧೨ ಶನಿವಾರ
ಸಮಯ : ಸಂಜೆ ೬.೦೦ ಕ್ಕೆ


ಸ್ಥಳ : ಸೃಜನ ಸಭಾಂಗಣ : ಕೆ.ಸಿ.ಡಿ ಆವರಣ ಧಾರವಾಡ
ದಿನಾಂಕ : ೨೦ ಮೇ ೨೦೧೨ ಭಾನುವರ
ಸಮಯ : ಸಂಜೆ ೬.೦೦ ಕ್ಕೆ



ಉದಾರ ಮನಸ್ಸಿನಿಂದ ಸಹಾಯ ಮಾಡಿ : ದೇಣಿಗೆಯ ಸದ್ಬಳಕೆಯ ಅವಿರತದ ಸಾಧನೆ
ಸಾಧನೆಯ ಹಾದಿ

೨೦೦೯ ೧೨,೦೦೦ ನೋಟ್ ಪುಸ್ತಕಗಳು ಬೆಂಗಳೂರು ದಕ್ಷಿಣ ಜಿಲ್ಲೆ
೨೦೧೦ ೭೦,೦೦೦ ನೋಟ್ ಪುಸ್ತಕಗಳು ಕರ್ನಾಟಕದ ೬ ಜಿಲ್ಲೆಗಳಲ್ಲಿ.
೨೦೧೧ ೮೦,೦೦೦ ನೋಟ್ ಪುಸ್ತಕಗಳು ಕರ್ನಾಟಕದ ೮ ಜಿಲ್ಲೆಗಳಲ್ಲಿ.
೨೦೧೨ ೧,೦೦,೦೦೦ ನೋಟ್ ಪುಸ್ತಕಗಳು ಕರ್ನಾಟಕದ ೧೨ ಜಿಲ್ಲೆಗಳಲ್ಲಿ. (ಉತ್ತರ ಕರ್ನಾಟಕದ ಕಡೆಗೆ ವಿಸ್ತರಣೆ)





ಟಿಕೆಟ್ ದರ : ೫೦೦ ರೂ ೨೫೦ ರೂ ೧೦೦ ರೂ

ಸಂಪರ್ಕ : ಸತೀಶ್ ಗೌಡ : ೯೮೮೦೦೮೬೩೦೦ (9880086300)
ರವಿ ಕುಲಕರ್ಣಿ : ೯೦೩೫೨೬೫೭೮೫ (9035265785)
ಕಿರಣ ವಾಲಿ : ೯೬೬೩೩೩೧೬೦೭ (9663331607)

Sunday, March 25, 2012

ದಾರಿಹೋಕ

ಇಂಡಿಕೇಟರ್ ಹಾಕ್ದೇ ಗಾಡಿ ತಿರುಗಿಸುವವನ,
ಸೀಟ್ ಇದ್ರು ಫುಟ್ಬೋರ್ಡ್ ಮೇಲೆ ನಿಲ್ಲುವವನ,
ಕೆಂಪು ಸಿಗ್ನಲ್ ಜಂಪ್ ಮಾಡುವವನ
ಹೆಲ್ಮೆಟ್ ಒಳಗಡೆ ಮೊಬೈಲ್ ಇಟ್ಟು ಮಾತನಾಡುವವನ..
ಪಕ್ಕದವನೋಡನೆ ಹರಟುತ್ತಾ, ಆಕ್ಕೆಲ್ರೇಟರ್ ಒತ್ತುವವನ...
ಮಕ್ಕಳು ಮರಿ ಕೂರಿಸಿಕೊಂಡು ನುಗ್ಗುವವನ....
ಅಪ್ಪ ಕೊಡಿಸಿದ ಬೈಕ್ಅಲ್ಲಿ ವೀಲಿಂಗ್ ಮಾಡುವವನ..

ಹೊಸ ಬಾಟ ಮೆಟ್ಟಲಿ - ಹೊಡೆ ಎಂದ - ದಾರಿಹೋಕ

Tuesday, January 17, 2012

ಯಾವುದುಕ್ಕೂ

ಯಾವುದಕ್ಕೂ ಹುಷಾರಾಗಿರಬೇಕು ನಾವು
ಯಾವುದಕ್ಕೂ ಒಂದ್ ಮಾತಾ ಕೇಳ್ ನೋಡು,
ಯಾವುದಕ್ಕೂ ಹೆದ್ರಲ್ಲ ನಾನು
ಯಾವುದಕ್ಕೂ ತಲೆ ಕೆಡ್ಸ್ಕೋಳೋಲಾ ನಾನು
ಯಾವುದುಕ್ಕೂ ಯೋಚಿಸಬೇಡ ನಾನಿದಿನಿ
 ಯಾವುದುಕ್ಕೂ ತಲೆ ಹಾಕ್ ಬೇಡ..
ಯಾವುದುಕ್ಕೂ  ಮೊದಲು ಮನೆ ಸೇರು....

ಈ "ಯಾವುದುಕ್ಕೂ "  ಅನ್ನೋದು  ಯಾವುದು ಗುರು ?

Monday, May 16, 2011

ನಮ್ಮ ಪಠ್ಯ ಪುಸ್ತಕಗಳು

ನಮ್ಮ ಪಠ್ಯ ಪುಸ್ತಕಗಳು

ಕಳೆದ ಕೆಲವು ದಿನಗಳಿಂದ ಈ ಯೋಚನೆ ಮಾಡ್ತಾ ಇದ್ದೇ... ನಮ್ಮ ಪಠ್ಯ  ಪುಸ್ತಕಗಳು..ಹಾಗೂ ಸಮಕಾಲೀನ ಅವಶ್ಯಕತೆಗಳ ಬಗ್ಗೆ.. ಈ ಮುಂಚೆ ಕೂಡ
ಹಲವು ಸಂಶೋಧನೆಗಳು , ಚರ್ಚೆಗಳು ನಡೆದಿವೆ ..ನಡೆಯುತ್ತಿವೆ...

SSLC yalli  ಶೇಕಡ ೭೩ ವಿದ್ಯಾರ್ಥಿಗಳು...ಉತ್ತೀರ್ಣರಾಗಿದ್ದಾರೆ.....ಇದೊಂದು ಐತಿಹಾಸಿಕ ಫಲಿತಾಂಶ ಎಂದು ಹೇಳಲಾಗಿದೆ..

ಈ ವಿದ್ಯಾರ್ಥಿಗಳಲ್ಲ್ಲಿ  ಎಷ್ಟು ಜನ ಮುಂದೆ ಪೀಯೂಸೀ,ಡಿಪ್ಲೊಮಾ.. ಮಾಡುತ್ತಾರೋ ಗೊತ್ತಿಲ್ಲ ಆದ್ರೆ...   ಬಹಳ ಜನ  ಇಲ್ಲಿಗೆ ತಮ್ಮ ವಿಧ್ಯಬ್ಯಾಸ ನಿಲ್ಲಿಸಿ..
ಹೊಲ ಗದ್ದೆ ಗಾಳಿಗೂ, ಹೊಟೇಲಿನಲ್ಲಿ ಕೆಳ್‌ಸಾಕ್ಕೆ ಸೇರಿ ಬಿಡುತ್ತಾರೆ... ಜಾಣರಾಗಿರದೆ ಇರಬಹ್ದು..ಅಥ್ವಾ ದುಡ್ಡಿರದೆ ಇರಬಹ್ದು...

ಆದ್ರೆ ಎಸ್ಟು ಜನ್ರಿಗೆ. ಇಲ್ಲಿಯವರೆಗೆ  ಕಲಿತ ವಿದ್ಯೆ.. ಸಹಾಯಕಾರಿಯಾಗಿದೆ ಬದುಕಿನಲ್ಲಿ..?

ನಾವು ನೋಡುತ್ತಿರುವ ಕೆಲವು ಮೂಲಭೂತ ಸಮಸ್ಯಎಗಳನ್ನು...ಇವರು ತಿಳಿಯಬಲ್ಲ್ರೆ ?

ಹೀಗೆ ಕೆಲವು ಪ್ರಶ್ನೆ ಗಳಿವೆ ನನ್ನ ಮನದಲ್ಲಿ ..

ತೆರಿಗೆ ಎಂದರೇನು ? ಯಾಕೆ ತೆರಿಗೆ ಕೊಡಬೇಕು ? ತೆರಿಗೆಇಂದೇನು ಮಾಡುತ್ತಾರೆ..?
ಬ್ಯಾಂಕು, ಅಂದರೆ ಏನು ? ವಿಮೆ ಅಂದರೇನು ?  ಯಾಕೆ ವಿಮೆ ಬೇಕು ?
ನಿಜ ಹೇಳುತ್ತೇನೆ ಇವತ್ತಿಗೂ ಕೂಡ  ಠೇವಣಿ ಸ್ಲಿಪ್ ಯಾವುದು ? ಜಮೆ ಸ್ಲಿಪ್ ಯಾವುದು ಎಂದು ತಿಳುವದಿಲ್ಲ ನಂಗೆ ....
ಅಪರಾಧ ಅಂದ್ರೆ ಏನು ? ಪೋಲೀಸ್ ಯಾರು ಯಾಕೆ ಅವರು ಬೇಕು ?
ಧರ್ಮಗಳ ಬಗ್ಗೆ ಹೇಳ್ಲಿದೀವಿ  ಆದ್ರೆ ಅದರ ಹಿಂದಿರೋ - ಶಾಂತಿ ಸಹಬಾಳ್ವೆ ಬಗ್ಗೆ ಎಲ್ಲಿ ಹೇಳುತ್ತಿವಿ ?
ವಿದ್ಯುತ್ ಎಂದ್ರೇನು ಗೊತ್ತು ಆದ್ರೆ ,ವಿದ್ಯುತ್ ತಂತಿ ಕಟ್ತಾಗಿ ಬಿದ್ದಾಗ ಏನು ಮಾಡಬೇಕು ?..
ಎಲ್ಲಿ ? ಮೂಢ ನಂಬಿಕೆ ಎಂದರೆ ಏನು ? ಜ್ಯೊತಿಶ್ಯ್ ಏನು ?


ಆಹಾರ ಸರಪಣಿ     ಗೊತ್ತು , ಆಹಾರ ಕಾಲ್ಬೆರಕೆ ?
ಔಷದಿ ಗೊತ್ತು .. ಆದ್ರೆ - expiry date andrenu  ಗೊತ್ತಿಲ್ಲ .....


ನಿಮ್ಮ ವಿಚಾರ ಗಲ್ಲನ್ನು ಇಲ್ಲಿ ನಮೂದಿಸಿ....

We can take it forward ... ( please forgive my kannada typing skill ...)



Wednesday, May 11, 2011

ಹಾಯಿ ದೋಣಿ, ಸಂಜೆಯ ನೋಡುತಾ, ಸೂರ್ಯನಿಗೆ ಹೇಳಿದ ಮಾತು

ಹಾಯಿ ದೋಣಿ, ಸಂಜೆಯ ನೋಡುತಾ, ಸೂರ್ಯನಿಗೆ ಹೇಳಿದ ಮಾತು 
ಒಂದಲ್ಲ ಒಂದು ದಿನ, ನೀನು ಮುಳುಗೋಕಿಂತ ಮುಂಚೆ ನಿನ್ನ ಹಿಡಿದೆ ಹಿಡೀತೀನಿ ಎಂದು.. 

ಆಡಿ,ಅತ್ತು, ಕುಣಿದು, ನಕ್ಕು, ಸುಸ್ತಾದ ಮಗು ತಬ್ಬಿಕೊಂಡು ಹೇಳಿದ ಮಾತು 
ನಾನಿನ್ನೂ ಮಲಗಬೇಕು..ಎಂದು.. 

ಕಳೆದು ಹೋದ ಆಡುಮರಿಗೆ , ಕಾಡು ಹೇಳಿದ ಮಾತು 
ಹೆದರಬೇಡ, ಇದು ಬರಿ ಕಾಡು ಎಂದು.. 

ಶ್ರುತಿ ಬಿಡದ ಸೋನೆ ಮಳೆ,ಭೂವಿಗೆ ಹೇಳಿದ ಮಾತು 
ಶೀತವಾದರೆ ನಾನಲ್ಲ ಹೊಣೆ, ಅದು ಮೋಡ ಎಂದು.. 




ಕಾರ್ರ್ಮುಗಿಲಿಂದ ಹೊರಟ ಮಿಂಚು, ಬೆಳಕ ಕಾಣದ ಕಾನನಕ್ಕೆ
ಹೇಳಿದ ಮಾತು, ಇದೋ ನೋಡು ಕಣ್ಣು ಕೊರಯ್ಸುವ  ಚಳಕ


ಹೊಳೆಯ ಬದಿ ಗರ್ಜಿಸುದ ಹುಲಿ, ಆನೆಗೆ ಹೇಳಿದ ಮಾತು 
ಇದು ನನ್ನ ಸರಹದ್ದು ಎಂದು... 

ಬೀಸುಗಾಳಿ, ಹಾರುವ ಹಕ್ಕಿಗೆ ಹೇಳಿದ ಮಾತು 
ತೋರಿಸು ಈಗ ನಿನ್ನ ಗಮ್ಮತು.. ಎಂದು 

ಮುಂಜಾವಿನ ಇಬ್ಬನಿ ಚಂದ್ರನಿಗೆ ಹೇಳಿದ ಮಾತು.. 
ಇದೆಲ್ಲ ನಿನ್ನದೆ ಕರಾಮತ್ತು ಎಂದು.. 

ಕಾಡಿಗೆಯಲ್ಲಿ ಕಂಡ ಹೆಣ್ನ ಕಣ್ಣು ಹೇಳಿದ ಮಾತು 
ಗೆಳೆಯ, ಹೇಳು ಪ್ರಶ್ನೊತ್ತರವಿಲ್ಲದ ಸಂಗತಿ ಎಂದು.. 

ಅರ್ಧಕೆ ನಿಂತ ಕವಿತೆ , ಕವಿಗೆ ಹೇಳಿದ ಮಾತು 
ಪರ್ವಾಗಿಲ್ಲಾ, ನಾಳೆ ಮುಂದುವರಿಸು..ಎಂದು

Tuesday, November 30, 2010

ಹಾಯಿ ದೋಣಿ, ಸಂಜೆಯ ನೋಡುತಾ, ಸೂರ್ಯನಿಗೆ ಹೇಳಿದ ಮಾತು

ಹಾಯಿ ದೋಣಿ, ಸಂಜೆಯ ನೋಡುತಾ, ಸೂರ್ಯನಿಗೆ ಹೇಳಿದ ಮಾತು 
ಒಂದಲ್ಲ ಒಂದು ದಿನ, ನೀನು ಮುಳುಗೋಕಿಂತ ಮುಂಚೆ ನಿನ್ನ ಹಿಡಿದೆ ಹಿಡೀತೀನಿ ಎಂದು.. 

ಆಡಿ,ಅತ್ತು, ಕುಣಿದು, ನಕ್ಕು, ಸುಸ್ತಾದ ಮಗು ತಬ್ಬಿಕೊಂಡು ಹೇಳಿದ ಮಾತು 
ನಾನಿನ್ನೂ ಮಲಗಬೇಕು..ಎಂದು.. 

ಕಳೆದು ಹೋದ ಆಡುಮರಿಗೆ , ಕಾಡು ಹೇಳಿದ ಮಾತು 
ಹೆದರಬೇಡ, ಇದು ಬರಿ ಕಾಡು ಎಂದು.. 

ಶ್ರುತಿ ಬಿಡದ ಸೋನೆ ಮಳೆ,ಭೂವಿಗೆ ಹೇಳಿದ ಮಾತು 
ಶೀತವಾದರೆ ನಾನಲ್ಲ ಹೊಣೆ, ಅದು ಮೋಡ ಎಂದು.. 




ಕಾರ್ರ್ಮುಗಿಲಿಂದ ಹೊರಟ ಮಿಂಚು, ಬೆಳಕ ಕಾಣದ ಕಾನನಕ್ಕೆ
ಹೇಳಿದ ಮಾತು, ಇದೋ ನೋಡು ಕಣ್ಣು ಕೊರಯ್ಸುವ  ಚಳಕ


ಹೊಳೆಯ ಬದಿ ಗರ್ಜಿಸುದ ಹುಲಿ, ಆನೆಗೆ ಹೇಳಿದ ಮಾತು 
ಇದು ನನ್ನ ಸರಹದ್ದು ಎಂದು... 

ಬೀಸುಗಾಳಿ, ಹಾರುವ ಹಕ್ಕಿಗೆ ಹೇಳಿದ ಮಾತು 
ತೋರಿಸು ಈಗ ನಿನ್ನ ಗಮ್ಮತು.. ಎಂದು 

ಮುಂಜಾವಿನ ಇಬ್ಬನಿ ಚಂದ್ರನಿಗೆ ಹೇಳಿದ ಮಾತು.. 
ಇದೆಲ್ಲ ನಿನ್ನದೆ ಕರಾಮತ್ತು ಎಂದು.. 

ಕಾಡಿಗೆಯಲ್ಲಿ ಕಂಡ ಹೆಣ್ನ ಕಣ್ಣು ಹೇಳಿದ ಮಾತು 
ಗೆಳೆಯ, ಹೇಳು ಪ್ರಶ್ನೊತ್ತರವಿಲ್ಲದ ಸಂಗತಿ ಎಂದು.. 

ಅರ್ಧಕೆ ನಿಂತ ಕವಿತೆ , ಕವಿಗೆ ಹೇಳಿದ ಮಾತು 
ಪರ್ವಾಗಿಲ್ಲಾ, ನಾಳೆ ಮುಂದುವರಿಸು..ಎಂದು

Tuesday, November 23, 2010

ನಾನೇಕೆ ಕನ್ನಡಿಗ ಹೇಳಲೇ


ನಾನೇಕೆ ಕನ್ನಡಿಗ ಹೇಳಲೇ

ಕಣ್ಣು ತೇವ ಮಾಡಿಕೊಂಡ ಹುಡುಗ 61 A  ನಲ್ಲ್ಲಿ
ಬಿಕ್ಕಿ ಬಿಕ್ಕಿ ಅತ್ತ್ತಾ ಹುಡುಗಿ 5 ನೇ ಪ್ಲ್ಯಾಟ್ಫಾರ್ಮ್ ಅಲ್ಲಿ
ವಿಷ್ಣು ಹೋದರೆಂದು ತಿಳಿದು, ಅದ ನೋಡಿ ನಾ ಕನ್ನಡಿಗ

ಕನ್ನಡಾ ಸರ್ಕಾರಿ ಶಾಲೇಲಿ  ಓದಿ , ಇವತ್ತು ನಾಸ್ಡೋಕ್ ಪ್ರೆಸಿಡೆಂಟು
ಇದ ಕೇಳಿ ನಾ ಕನ್ನಡಿಗ

ಶಂಕರ್ ನಾಗ್ ಇದ್ದಿದ್ರೆ , ಆಸ್ಕರ್ ಏನು ನೋಬಲ್ ಬರೋದು..
ಅಂದ ಮಾತು ಕೇಳಿ  ನಾ ಕನ್ನಡಿಗ

ರಾಜ್ ಕುಮಾರ ಇದ್ದಾಂಗಿದನೆ , ಎಂದು ಲಟಿಕೆ ತೆಗೆದ ಮುದುಕಿಯ
ನೋಡಿದಾಗ ನಾನು ಕನ್ನಡಿಗ

ತೇಜಸ್ವೀಯ ಜುಗಾರಿ ಕ್ರಾಸ್ ನಲ್ಲಿ ಕಳೆದು ಹೋದಾಗ ನಾನು ಕನ್ನಡಿಗ

ಅಮ್ಮ,  "ಹೋಗಿ ಬಾ ಬನವಾಸಿಗೆ , ತಿಳಿದು ಬಾ " ಆರಂಕುಶ" ಅಂದ್ರೇನು "
ಎಂದಾಗ ನಾನು ಕನ್ನಡಿಗ

ಇನ್ನೂ ತುಂಬಾ ಇದೆ ಹೇಳ್ಲಿಕ್ಕೆ ನಾನೇಕೆ ಕನ್ನಡಿಗ ಅಂತ.... ನೀವು ಹೇಳಿದರೆ ಇನ್ನೂ ಹೆಚ್ಚು ಕನ್ನಡಿಗ ನಾನು.

Monday, September 27, 2010

U....and .....I



Keep India Unite d
On 28/9  or whenever the verdict is out

STOP BREEDING HATREDNESS

LETS GIVE OURSELVES A BETTER INDIA







Wednesday, September 22, 2010

lucky

 

ಕ್ಯಾಮರಮ್ಯಾನ್ ಜೊತೆ "ಅನಿತಾಟಿವಿ 9 ಮಂಗಳೂರ್
ಕ್ಯಾಮರಮ್ಯಾನ್ ಜೊತೆ "ಸುಗುಣಾಟಿವಿ 9 ಗುಲ್ಬರ್ಗಾ
ಕ್ಯಾಮರಮ್ಯಾನ್ ಜೊತೆ "ಉಷಾಟಿವಿ 9 ಹುಬ್ಳೀ
 ಕ್ಯಾಮರಮ್ಯಾನ್ ಏನ್ ಲಕ್ಕೀ ಅದಾನ್ಲೇ