Wednesday, April 25, 2012

ಅವಿರತ ನೋಟ್ ಪುಸ್ತಕ ವಿತರಣಾ ಯೋಜನೆ ೨೦೧೨

ನೋಟ್ ಪುಸ್ತಕ ವಿತರಣಾ ಯೋಜನೆ ೨೦೧೨ : ಈ ಯೋಜನೆಂ ೪ನೇ ವರ್ಷದ ಅನುಷ್ಠಾನದ ಅಂಗವಾಗಿ ಅವಿರತ ಬಳಗವು ರಾಜ್ಯದ ಹಿಂದುಳಿದ ಪ್ರದೇಶದ ಹೆಚ್ಚು ಮಕ್ಕಳಿಗೆ ಸಹಾಯ ತಲುಪುವ ಪ್ರಯತ್ನ ಮಾಡುತ್ತಿದ್ದೇವೆ. ಈ ಯೋಜನೆಯಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಒಂದು ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ನೋಟ್ ಪುಸ್ತಕವನ್ನು ತಲುಪಿಸುತ್ತಿದ್ದೇವೆ. 
೨೦೧೨ -೧೩ ರ ಶೈಕ್ಷಣಿಕ ವರ್ಷಕ್ಕೆ ಈ ಕಾರ್ಯಕ್ರಮವನ್ನು ಉತ್ತರ ಕರ್ನಾಟಕಕ್ಕು ವಿಸ್ತರಿಸುತ್ತಿದ್ದೇವೆ. ಇದರ ಸಲುವಗಿ ದೇಣಿಗೆ ಸಂಗ್ರಹಿಸಲು ಈ ನಾಟಕವನ್ನು ಹಮ್ಮಿಕೊಳ್ಳುತ್ತಿದ್ದೇವೆ. ನಿಮ್ಮ ಉದಾರ ಮನಸ್ಸಿನ ದೇಣಿಗೆ ಹಾಗು ಉತ್ತೇಜನ ಬಹು ಮುಖ್ಯವಾದುದು.



ಸ್ಥಳ : ಬಯೋಟೆಕ್ ಸಭಾಂಗಣ : ಬಿ.ವಿ.ಬಿ ಆವರಣ ಹುಬ್ಬಳ್ಳಿ
ದಿನಾಂಕ : ೧೯ ಮೇ ೨೦೧೨ ಶನಿವಾರ
ಸಮಯ : ಸಂಜೆ ೬.೦೦ ಕ್ಕೆ


ಸ್ಥಳ : ಸೃಜನ ಸಭಾಂಗಣ : ಕೆ.ಸಿ.ಡಿ ಆವರಣ ಧಾರವಾಡ
ದಿನಾಂಕ : ೨೦ ಮೇ ೨೦೧೨ ಭಾನುವರ
ಸಮಯ : ಸಂಜೆ ೬.೦೦ ಕ್ಕೆ



ಉದಾರ ಮನಸ್ಸಿನಿಂದ ಸಹಾಯ ಮಾಡಿ : ದೇಣಿಗೆಯ ಸದ್ಬಳಕೆಯ ಅವಿರತದ ಸಾಧನೆ
ಸಾಧನೆಯ ಹಾದಿ

೨೦೦೯ ೧೨,೦೦೦ ನೋಟ್ ಪುಸ್ತಕಗಳು ಬೆಂಗಳೂರು ದಕ್ಷಿಣ ಜಿಲ್ಲೆ
೨೦೧೦ ೭೦,೦೦೦ ನೋಟ್ ಪುಸ್ತಕಗಳು ಕರ್ನಾಟಕದ ೬ ಜಿಲ್ಲೆಗಳಲ್ಲಿ.
೨೦೧೧ ೮೦,೦೦೦ ನೋಟ್ ಪುಸ್ತಕಗಳು ಕರ್ನಾಟಕದ ೮ ಜಿಲ್ಲೆಗಳಲ್ಲಿ.
೨೦೧೨ ೧,೦೦,೦೦೦ ನೋಟ್ ಪುಸ್ತಕಗಳು ಕರ್ನಾಟಕದ ೧೨ ಜಿಲ್ಲೆಗಳಲ್ಲಿ. (ಉತ್ತರ ಕರ್ನಾಟಕದ ಕಡೆಗೆ ವಿಸ್ತರಣೆ)





ಟಿಕೆಟ್ ದರ : ೫೦೦ ರೂ ೨೫೦ ರೂ ೧೦೦ ರೂ

ಸಂಪರ್ಕ : ಸತೀಶ್ ಗೌಡ : ೯೮೮೦೦೮೬೩೦೦ (9880086300)
ರವಿ ಕುಲಕರ್ಣಿ : ೯೦೩೫೨೬೫೭೮೫ (9035265785)
ಕಿರಣ ವಾಲಿ : ೯೬೬೩೩೩೧೬೦೭ (9663331607)

Sunday, March 25, 2012

ದಾರಿಹೋಕ

ಇಂಡಿಕೇಟರ್ ಹಾಕ್ದೇ ಗಾಡಿ ತಿರುಗಿಸುವವನ,
ಸೀಟ್ ಇದ್ರು ಫುಟ್ಬೋರ್ಡ್ ಮೇಲೆ ನಿಲ್ಲುವವನ,
ಕೆಂಪು ಸಿಗ್ನಲ್ ಜಂಪ್ ಮಾಡುವವನ
ಹೆಲ್ಮೆಟ್ ಒಳಗಡೆ ಮೊಬೈಲ್ ಇಟ್ಟು ಮಾತನಾಡುವವನ..
ಪಕ್ಕದವನೋಡನೆ ಹರಟುತ್ತಾ, ಆಕ್ಕೆಲ್ರೇಟರ್ ಒತ್ತುವವನ...
ಮಕ್ಕಳು ಮರಿ ಕೂರಿಸಿಕೊಂಡು ನುಗ್ಗುವವನ....
ಅಪ್ಪ ಕೊಡಿಸಿದ ಬೈಕ್ಅಲ್ಲಿ ವೀಲಿಂಗ್ ಮಾಡುವವನ..

ಹೊಸ ಬಾಟ ಮೆಟ್ಟಲಿ - ಹೊಡೆ ಎಂದ - ದಾರಿಹೋಕ

Tuesday, January 17, 2012

ಯಾವುದುಕ್ಕೂ

ಯಾವುದಕ್ಕೂ ಹುಷಾರಾಗಿರಬೇಕು ನಾವು
ಯಾವುದಕ್ಕೂ ಒಂದ್ ಮಾತಾ ಕೇಳ್ ನೋಡು,
ಯಾವುದಕ್ಕೂ ಹೆದ್ರಲ್ಲ ನಾನು
ಯಾವುದಕ್ಕೂ ತಲೆ ಕೆಡ್ಸ್ಕೋಳೋಲಾ ನಾನು
ಯಾವುದುಕ್ಕೂ ಯೋಚಿಸಬೇಡ ನಾನಿದಿನಿ
 ಯಾವುದುಕ್ಕೂ ತಲೆ ಹಾಕ್ ಬೇಡ..
ಯಾವುದುಕ್ಕೂ  ಮೊದಲು ಮನೆ ಸೇರು....

ಈ "ಯಾವುದುಕ್ಕೂ "  ಅನ್ನೋದು  ಯಾವುದು ಗುರು ?